ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-
ಭಾರತದ ಕೈಗಾರಿಕೆಗಳಿಗೆ ಆವಶ್ಯಕವಾದ ತಾಂತ್ರಿಕ ಪರಿಣತಿಯನ್ನು ಹೆಚ್ಚಿಸುವ ಉದ್ದೇಶದಿಂದ ಸ್ಥಾಪಿತವಾದ ಈ ಹೆಸರಿನ ಸಂಸ್ಥೆಗಳು ಭಾರತದಲ್ಲಿ 5 ಸ್ಥಳಗಳಲ್ಲಿವೆ. ಮೊದಲನೆಯದು 1951ರಲ್ಲಿ ಖರಗ್ಪುರದಲ್ಲಿ ಪ್ರಾರಂಭವಾಯಿತು. ಬೊಂಬಾಯಿ ಮತ್ತು ಮದ್ರಾಸಿನ ಸಂಸ್ಥೆಗಳು ಪ್ರಥಮ ತಂಡದ ವಿದ್ಯಾರ್ಥಿಗಳನ್ನು ಕ್ರಮವಾಗಿ 1958 ಮತ್ತು 59ರಲ್ಲಿ ಸೇರಿಸಿಕೊಂಡವು. ಕಾನ್ಪುರದ ಸಂಸ್ಥೆ 1960ರಲ್ಲಿ ಪ್ರಥಮ ತಂಡದ ವಿದ್ಯಾರ್ಥಿಗಳನ್ನು ದಾಖಲುಮಾಡಿಕೊಂಡಿತು. 1963ರಲ್ಲಿ ದೆಹಲಿಯ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜನ್ನು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸ್ಥಾನಮಾನಕ್ಕೆ ಏರಿಸಲಾಯಿತು. ಬೊಂಬಾಯಿ, ಮದ್ರಾಸ್ ಮತ್ತು ಕಾನ್ಪುರದ ಇನ್‍ಸ್ಟಿಟ್ಯೂಟ್ ಸ್ನಾತಕ ಪೂರ್ವ ವಿದ್ಯಾಭ್ಯಾಸಕ್ಕೆ 1,600 ಮತ್ತು ಸ್ನಾತಕೋತ್ತರ ಹಾಗೂ ಸಂಶೋಧನ ವಿದ್ಯಾಭ್ಯಾಸಕ್ಕೆ 400 ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುವ ಸಾಮಥ್ರ್ಯ ಪಡೆದಿದೆ. 2,000 ಸ್ನಾತಕಪೂರ್ವ ಹಾಗೂ 400 ಸ್ನಾತಕೋತ್ತರ ಅಲ್ಲದೆ ಸಂಶೋಧನ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುವುದು. ಖರಗ್ಪುರದ ಸಂಸ್ಥೆಯ ಗುರಿ. ದೆಹಲಿ ಕಾಲೇಜಿನಲ್ಲಿ 1,250 ಸ್ನಾತಕ ಪೂರ್ವ ವಿದ್ಯಾರ್ಥಿಗಳಿಗೂ 300 ಸ್ನಾತಕೋತ್ತರ ಹಾಗೂ ಸಂಶೋಧನ ವಿದ್ಯಾರ್ಥಿಗಳಿಗೂ ಪ್ರವೇಶ ದೊರಕಿಸಿಕೊಡುವ ಸಾಧ್ಯತೆಯಿದೆ. ಈ ಇನ್‍ಸ್ಟಿಟ್ಯೂಟ್‍ಗಳ ಉದ್ದೇಶ ವಿಶೇಷ ತಾಂತ್ರಿಕ e್ಞÁನವುಳ್ಳ ಪದವೀಧರರನ್ನು; ತಯಾರು ಮಾಡುವುದು ಮತ್ತು ತಾಂತ್ರಿಕ ರಂಗದಲ್ಲಿ ಉನ್ನತಮಟ್ಟದ ಸಂಶೋಧನೆ ನಡೆಸುವುದು.						
(ಸಿ.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ